ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಪ್ರಮುಖ ಅಂಗಗಳಿವೆ. ಇವುಗಳ ಜೊತೆಗೆ ಜನಾಭಿಪ್ರಾಯವನ್ನು ಪ್ರತಿನಿಧಿಸುವ ಪತ್ರಿಕಾಂಗ ಮಾಧ್ಯಮವನ್ನು “ನಾಲ್ಕನೇ ಪೀಠ” ಎಂದು ಗುರುತಿಸಲಾಗಿದೆ. ಆದರೆ ಸಮಾಜದ ಅತೀ ಕೆಳಗಿನ ವರ್ಗಗಳು, ಕಲಿತ,ದಲಿತ–ಬಹುಜನರು, ಶೋಷಿತರು, ಹಿಂದುಳಿದ ,ಅಲ್ಪಸಂಖ್ಯಾತರು,ವಂಚಿತರು ಮತ್ತು ನಿರ್ಲಕ್ಷಿತ ಸಮುದಾಯಗಳ ನೈಜ ಧ್ವನಿ ದುಬರ್ಲರನ್ನು, ಸಬಲರನ್ನಾಗಿ ಈ ಐದು ಪೀಠಗಳಲ್ಲಿಯೂ ಹೊಂದಿಕೊಂಡು ಸಮರ್ಪಕವಾಗಿ ಪ್ರತಿಬಿಂಬಿಸಲು ಎಂಬ ಅರಿವಿನಿಂದ “ಭಾರತೀಯ ಪಂಚಮ ಪೀಠ” ಸೇವೆ,ಸಹಕಾರ,ಸರ್ವೋದ್ಧಾರ,ಮಾಡಲು ಈ ಕಲ್ಪನೆ ಉದ್ಭವಿಸಿದೆ.
ಭಾರತೀಯ ಪಂಚಮ ಪೀಠವು ಯಾವುದೇ ಸರ್ಕಾರದ ಅಂಗವಲ್ಲ; ಇದು ಜನಸಾಮಾನ್ಯರ ಹಕ್ಕುಗಳು, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಗೆ ನಿಂತಿರುವ ಜನಪಕ್ಷೀಯ ಸಾಮಾಜಿಕ ವೇದಿಕೆ ಆಗಿದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ, ಬಾಂಧವ್ಯ ಮತ್ತು ನ್ಯಾಯ ಎಂಬ ಮೌಲ್ಯಗಳನ್ನು ನೆಲಮಟ್ಟದಲ್ಲಿ ಜಾರಿಗೊಳಿಸುವುದು ಇದರ ಮೂಲ ಧ್ಯೇಯ.
ಈ ಪೀಠವು ದಲಿತ–ಬಹುಜನರ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ದಾಖಲಿಸಿ, ಜನಜಾಗೃತಿ ಮೂಡಿಸಿ, ಆಡಳಿತ ವ್ಯವಸ್ಥೆಯ ಮೇಲೆ ನೈತಿಕ ಹಾಗೂ ಸಂವಿಧಾನಾತ್ಮಕ ಒತ್ತಡ ನಿರ್ಮಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಅನ್ಯಾಯ, ಅಸಮಾನತೆ, ಭ್ರಷ್ಟಾಚಾರ, ಹಕ್ಕು ಹರಣಗಳ ವಿರುದ್ಧ ಶಾಂತ, ಸಂಘಟಿತ ಮತ್ತು ಸಂವಿಧಾನಬದ್ಧ ಹೋರಾಟ ನಡೆಸುವುದು ಇದರ ಕಾರ್ಯಶೈಲಿ.
ಭಾರತೀಯ ಪಂಚಮ ಪೀಠವು ಕೇವಲ ವಿರೋಧದ ವೇದಿಕೆಯಲ್ಲ; ಇದು ಪರಿಹಾರ ಸೂಚಿಸುವ, ಮಾರ್ಗದರ್ಶನ ನೀಡುವ ಮತ್ತು ಜನರನ್ನು ಸಂಘಟಿಸುವ ಜವಾಬ್ದಾರಿಯುತ ಜನಾಂದೋಲನಾತ್ಮಕ ವೇದಿಕೆ ಆಗಿದೆ. ಜನರ ಧ್ವನಿಯೇ ಪ್ರಜಾಪ್ರಭುತ್ವದ ಆತ್ಮ ಎಂಬ ನಂಬಿಕೆಯೊಂದಿಗೆ, ಜನರಿಂದ–ಜನರಿಗಾಗಿ–ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುವುದು ಇದರ ಗುರಿಯಾಗಿದೆ.
ಸಾರಾಂಶವಾಗಿ, ಭಾರತೀಯ ಪಂಚಮ ಪೀಠವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ನೇರ ಭಾಗವಹಿಸುವಿಕೆಯನ್ನು ಬಲಪಡಿಸುವ, ಸಂವಿಧಾನ ಸಂರಕ್ಷಣೆಗೆ ನಿಂತಿರುವ ಐದನೇ ಜನಪೀಠವಾಗಿದೆ.



























At Bharatiya Panchama Peetha, we cherish our donators and are committed to empowering communities. We invite you to visit us to discover more about our charitable trust.
We use cookies to analyze website traffic and optimize your website experience. By accepting our use of cookies, your data will be aggregated with all other user data.